ಪ್ರಿಯಾಂಕ ಈ ವಾರ ತೆರೆಗೆ
Posted date: 01 Mon, Feb 2016 – 10:18:34 AM

ಸಾಯಿಶ್ರೀ ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ಎ. ಮೋಹನ್ ನಿರ್ಮಿಸಿರುವ ಪ್ರಿಯಾಂಕ ಚಿತ್ರವು ಇದೇ ೫ ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಪ್ರಿಯಾಂಕ ಚಿತ್ರವು ಈ ಬಾರಿಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದು, ಪ್ರಿಯಾಂಕ ಉಪೇಂದ್ರರ ಮನೋಜ್ಞ ಅಭಿನಯ ಪ್ರತಿಯೊಬ್ಬ ಮಹಿಳೆಯನ್ನು ಆಕರ್ಷಿಸುತ್ತಿದೆ.
ಚಿತ್ರಕ್ಕೆ ಕೇಶವಚಂದ್ರ ಸಾಹಿತ್ಯ, ಕೃಪಾಕರ್ ಸಂಗೀತ, ಚಿನ್ನಿಪ್ರಕಾಶ್ ನೃತ್ಯ, ರವಿಚಂದ್ರ ಸಂಕಲನವಿದ್ದು, ಚಿತ್ರದ ಕಥೆ, ಚಿತ್ರಕಥೆ ಸಂಭಾಷಣೆ ಛಾಯಾಗ್ರಹಣ ಹಾಗೂ ನಿರ್ದೇಶನ ದಿನೇಶ್‌ಬಾಬು ತಾರಾಗಣದಲ್ಲಿ ಪ್ರಿಯಾಂಕ ಉಪೇಂದ್ರ, ಪ್ರಕಾಶ್‌ರೈ, ತೇಜಸ್, ಶಿವಧ್ವಜ್, ವೀಣಾಸುಂದರ್, ಅವಿನಾಶ್, ಜೈಶ್ರೀ, ಸುದರ್ಶನ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed